ಚಂದನ್ ಶೆಟ್ಟಿ ಅವರು ೧೭ ಸೆಪ್ಟೆಂಬರ್ ೧೯೮೯ ರಂದು ಹಾಸನ ಜಿಲ್ಲೆಯ ಶಾಂತಿಗ್ರಮದ ಹೊಳೆನರಸೀಪುರದಲ್ಲಿ ಜನಿಸಿದರು. ಇವರ ಪೂರ್ತಿ ಹೆಸರು ಚಂದನ್ ಪರಮೇಶ್ ಶೆಟ್ಟಿ. ನಟನಾಗಿ, ಸಂಗೀತ ನಿರ್ದೇಶಕನಾಗಿ, ಗಿಟಾರ್ ವಾದಕನಾಗಿ, ಡ್ರಮ್ಮರ್ ಮತ್ತು ರಾಪರ್ ಗಾಯಕನಾಗಿ ಇವರು ಹೆಸರು ಮಾಡಿದ್ದಾರೆ. "ಟಾಪ್ ಟು ಬಾಟಮ್", "೩ ಪೆಗ್", "ಚಾಕೊಲೇಟ್ ಗರ್ಲ್", "ಹಾಲಗೊಡೆ" ಮತ್ತು "ಟಕಿಲಾ" ನಂತಹ ಹಾಡುಗಳಲ್ಲಿ ಏಕವ್ಯಕ್ತಿ ಕಲಾವಿದನಾಗಿ ಚಂದನ್ ಶೆಟ್ಟಿ ಅಭಿನಯಿಸಿದ್ದಾರೆ. == ವೃತ್ತಿಜೀವನ == ಚಂದನ್ ಶೆಟ್ಟಿ ೨೦೧೨ ರಲ್ಲಿ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯರವರ ಅಲೆಮಾರಿ ಚಿತ್ರದ ಗೀತರಚನೆಕಾರ ಮತ್ತು ಸಹಾಯಕ ಸಂಗೀತ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರವೇಶಿಸಿದ್ದಾರೆ. ನಂತರ ವರದನಾಯಕ, ಪವರ್, ಚಕ್ರವ್ಯೂಹ ಮತ್ತು ಭಜರಂಗಿ ಚಲನಚಿತ್ರಗಳಿಗೆ ಕೆಲಸ ಮಾಡಿದರು. ಕನ್ನಡ ಬಿಗ್ ಬಾಸ್ ಸೀಸನ್ ೫ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿಯವರು ಜಯಗಳಿಸಿದರು. == ಧ್ವನಿಮುದ್ರಿಕೆ ಪಟ್ಟಿ == == ಆಲ್ಬಮ್ ಹಾಡುಗಳು == ಹಲಾಗೊಡೆ ೩ ಪೆಗ್# ಚಾಕೊಲೇಟ್ ಗರ್ಲ್ ಟಕಿಲಾ ನನ್ನಾ ಪ್ರೀತಿ ಸುಳ್ಳಾಲ್ಲ ಬೆಂಕಿ ಶೋಕಿಲಾಲ ಪಾರ್ಟಿ ಫ್ರೀಕ್ ನೋಡು ಶಿವ ಲಂಬರ್ಗಿನಿ == ದೂರದರ್ಶನ == == ಉಲ್ಲೇಖಗಳು ==